ಮನಸ್ವಿನಿ ಯೋಜನೆ - ಮಹಿಳೆಯರಿಗೆ ಪ್ರತಿ ತಿಂಗಳು 800ರೂಪಾಯಿ ಪೆನ್ಷನ್ ಹಣ ಪಡೆಯುವುದು ಹೇಗೆ.?ಸಂಪೂರ್ಣ ಮಾಹಿತಿ 


ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನದಲ್ಲಿ ಏನು ತಿಳಿಸ್ತಾ ಇದೀನಿ ಅಂದ್ರೆ ಮಹಿಳೆಯರು ಪ್ರತಿ ತಿಂಗಳು 800 ರೂಪಾಯಿ ಪಡೆದುಕೊಳ್ಳುವ ಮನಸ್ವಿನಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.
ಬಡತನ ವರ್ಗದ ಮಹಿಳೆಯರಿಗೆ ರಾಜ್ಯ ಸರ್ಕಾರವು ಇವಾಗ ಮತ್ತೊಂದು ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ ಈ ಯೋಜನೆಯಲ್ಲಿ ಮಹಿಳೆಯರು ಪ್ರತಿ ತಿಂಗಳು 800ರೂಪಾಯಿ ಗಳನ್ನ ಪಡೆಯಬಹುದಾಗಿದೆ ಹಾಗಾದರೆ ಅದು ಯಾವ ಯೋಜನೆ ಅದಕ್ಕೆ ಯಾರ್ಯಾರು ಅರ್ಹರು ಮತ್ತು ಅರ್ಜಿಯನ್ನ ಸಲ್ಲಿಸುವುದು ಹೇಗೆ..? ಅರ್ಜಿಯನ್ನ ಸಲ್ಲಿಸುವುದಕ್ಕೆ ಬೇಕಾಗುವಂತ ದಾಖಲಾತಿಗಳು ಏನೇನು ..?ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.Whatsapp


ಮನಸ್ವಿನಿ ಯೋಜನೆ (Manasvini Yojane)

ಮನಸ್ವಿನಿ ಯೋಜನೆ ಎಂಬ ಈ ಹೊಸ ಯೋಜನೆಯನ್ನು ವಿವಾಹವಾಗದೆ ಅಥವಾ ವಿಚ್ಛೇದಿತರಾಗಿ ಸಾಮಾಜಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಮಹಿಳೆಯರಿಗಾಗಿ ಮನಸ್ವಿನಿ ಯೋಜನೆ ರೂಪಿಸಲಾಗಿದೆ.

ಇಂದಿನ ದಿನಗಳಲ್ಲಿ ಸರ್ಕಾರ ತಂದಿರುವ ಯೋಜನೆಗಳು ಹೆಣ್ಣು ಮಕ್ಕಳಿಗೆ ತುಂಬಾ ಸಹಕಾರಿ ಆಗುತ್ತಿದೆ ಮತ್ತು ಅವರ ಜೀವನವನ್ನು ರೂಪಿಸಿಕೊಳ್ಳಲು ಇತ್ತೀಚಿನ ಯೋಜನೆಗಳು ಬಹಳಷ್ಟು ಅನುಕೂಲವಾಗಿವೆ. ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳಿಗೆ ರೂ.2000 ಜೊತೆಗೆ ಮನಸ್ವಿನಿ ಯೋಜನೆ ಮೂಲಕ ಮಹಿಳೆಯರು ಪ್ರತಿ ತಿಂಗಳು 800ರೂಪಾಯಿವನ್ನ ಪಡೆಯಬಹುದಾಗಿದೆ.ಮನಸ್ವಿನಿ ಯೋಜನೆಯ ಉದ್ದೇಶ..?

ರಾಜ್ಯದಲ್ಲಿನ ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64 ವರ್ಷದೊಳಗಿನ ಮಹಿಳೆಯರಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸಿ ಸಮಾಜದಲ್ಲಿ ಮುಖ್ಯ ವಾಹಿನಿ ತರುವ ಉದ್ದೇಶದಿಂದ ಸರ್ಕಾರವು ಮನಸ್ವಿನಿ ಯೋಜನೆ ಜಾರಿಗೆ ತರಲಾಗಿದೆ.

ಮನಸ್ವಿನಿ ಯೋಜನೆಯ ಅರ್ಹತೆ..?

ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 
➤ ಈ ಯೋಜನೆಯು 40 ವರ್ಷದಿಂದ 60 ವರ್ಷದೊಳಗಿನ ಅವಿವಾಹಿತ ಮತ್ತು ವಿಚ್ಛೇಜಿತ ಮಹಿಳೆಯರಿಗೆ ದೊರೆಯುತ್ತದೆ.
➤ ವಾರ್ಷಿಕ ಆದಾಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರೂಪಾಯಿ 32,000 ಕ್ಕಿಂತ ಕಡಿಮೆ ಇರಬೇಕು.
➤ ಬೇರೆ ಯಾವುದೇ ರೀತಿಯ ಪಿಂಚಣಿ ಅಥವಾ ಯೋಜನೆಗಳ ಮಾಶಾಸನ ತೆಗೆದುಕೊಳ್ಳುವವರಾಗಿರಬಾರದು.


ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ..?

⧭ ಬಿಪಿಎಲ್ ಪಡಿತರ ಚೀಟಿ.
⧭  ಆದಾಯ ಪ್ರಮಾಣ ಪತ್ರ.
⧭  ಚುನಾವಣಾ ಗುರುತಿನ ಚೀಟಿ
⧭  ವಿವಾಹಿತರು ತಮಗೆ ವಿವಾಹ ಆಗಿಲ್ಲದಿರುವ ಬಗ್ಗೆ ಸ್ವಯಂಘೋಷಣಾ ಪ್ರಮಾಣ ಪತ್ರ
⧭  ವಿವಾಹ ವಿಚ್ಛೇದಿತರು ವಿಚ್ಛೇದನದ ಸ್ವಯಂ ಘೋಷಣಾ ಪ್ರಮಾಣ ಪತ್ರ
⧭  ಬ್ಯಾಂಕ್ ಅಥವಾ ಅಂಚೆ ಖಾತೆ ಪಾಸ್ ಬುಕ್ ಜೆರಾಕ್ಸ್ ಮತ್ತು 
⧭  ಆಧಾರ್ಕಾ  ಕಾರ್ಡ್ 


Telegram

ಅರ್ಜಿ ಸಲ್ಲಿಸುವುದು ಹೇಗೆ.?

ಅರ್ಜಿಯನ್ನು ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. 
ಅಥವಾ ನಿಮ್ಮ ಹತ್ತಿರವಿರುವ ಅಟಲ್ ಜಿ ಸ್ನೇಹ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಕೇಳಿರುವ ದಾಖಲಾತಿಗಳನ್ನು ಒದಗಿಸಿದೆ ಅರ್ಜಿಯನ್ನು ಸಲ್ಲಿಸಬಹುದು. 

ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ನಮ್ಮ ಯುಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ ಧನ್ಯವಾದಗಳು.

****** ಧನ್ಯವಾದಗಳು ********


ಇದನ್ನು ಓದಿ  :