ನಮಸ್ಕಾರ ಸ್ನೇಹಿತರೆ. ನಿಮ್ಮೆಲರಿಗೂ ಗೃಹ ಜ್ಯೋತಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇನೆ. 
ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹೊಸ ವೆಬ್ಸೈಟ್ ಯಾವುದು.? ಹಾಗೆ ಬೇಕಾಗುವ ದಾಖಲಾತಿಗಳು ಯಾವವು.? ಹಾಗೆ ಷರತ್ತುಗಳು ಏನು ಇದಾವೆ.? ಅರ್ಜಿ ಸಲ್ಲಿಸುವ ವಿಧಾನ ಹೇಗಿದೆ.? ಎಂದು ಸಂಪೂರ್ಣ ಮಾಹಿತಿ ತಿಳಿಸುತ್ತೇನೆ. ಹಾಗಾದರೆ ಬನ್ನಿ ಶುರು ಮಾಡೋಣ ..ಹೀಗೆ ಏನು ಹೆಚ್ಚು ಸಾರ್ವಜನಿಕರ ಉಪಯುಕ್ತ ಮಾಹಿತಿಗಾಗಿ.  ನಮ್ಮ ಆರ್.ಕೆ .ಕೆಂಭಾವಿ  ಯೌಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ.



ಗೃಹ ಜ್ಯೋತಿ ಯೋಜನೆ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ :

ಕರ್ನಾಟಕ ಸರ್ಕಾರವು ಕರ್ನಾಟಕದ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಉಚಿತವಾಗಿ 200 ಯೂನಿಟ್  ವಿದ್ಯುತ್ ಅನ್ನು ಕೊಡುವುದಾಗಿ ತಮ್ಮ ಖಾತರಿ ಯೋಜನೆಗಳಲ್ಲಿ ಘೋಷಣೆ ಮಾಡಿತ್ತು . ಅದರಂತೆ ಈಗ ಅದು ಜಾರಿಗೆ ಬಂದಿದ್ದು , ಜೂಲೈ 1ನೇ ತಾರೀಕಿನಿಂದ ಕರ್ನಾಟಕದ್ಯಾದಂತ ಜಾರಿಯಾಗಲಿದೆ. ಜೂಲೈ 1ನೇ ತಾರೀಕಿನಿಂದ ಪ್ರತಿ ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಸುವ ಕುಟುಂಬಗಳು ಯಾವುದೇ ವಿದ್ಯುತ್ ಶುಲ್ಕ ಪಾವತಿಸಬೇಕಾಗಿಲ್ಲ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕ . ಅಹ್ರತೆ ಏನು. ಷರತ್ತುಗಳು ಯಾವವು . ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು ಅಂಥ ತಿಳಿಯೋಣ ಬನ್ನಿ. 

Date for Online
ಗೃಹ ಜ್ಯೋತಿ ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ 

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕ ಯಾವುದು.?

ಸರ್ಕಾರದ ಖಾತರಿ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೊಸ ವೆಬ್ಸೈಟ್ ಪ್ರಾರಂಭ ಮಾಡಿದ್ದೂ . ಆ ಹೊಸ ವೆಬ್ಸೈಟ್ ಮೂಲಕ ಪ್ರತಿಯೊಬ್ಬರೂ 4 ಖಾತರಿ ಯೋಜನೆಗಳಿಗೆ ಆನ್ಲೈನ್ ಅರ್ಜಿಗಳು ಖುದ್ದಾಗಿ ಸಲ್ಲಿಸಬಹುದು. ಖಾತರಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ 200 ಯೂನಿಟ್ ಉಚಿತ ವಿದ್ಯುತ್  ಯೋಜನೆಯ ಲಾಭ ಪಡೆಯಲು ನೋಂದಣಿ ಪ್ರಕ್ರಿಯೆಯು ಇದೆ  ಜೂನ್ 18ರಿಂದ ಹೊಸ ವೆಬ್ಸೈಟ್ ಮೂಲಕ ಆರಂಭಿಸಲಾಗುವುದು. 


ಗೃಹ ಜ್ಯೋತಿ ಯೋಜನೆಯ ಷರತ್ತುಗಳು & ಅಹ್ರತೆಗಳು .?

ಗೃಹ ಜ್ಯೋತಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಟ 200 ಯೂನಿಟ್ ಗಳವರೆಗೂ ಬಳಕೆಯ ಮಿತಿಯಲ್ಲಿ  ಪ್ರತಿ ಗ್ರಾಹಕರಿಗೆ ಮಾಸಿಕ ಸರಾಸರಿ ಬಳಕೆಯ ಯೂನಿಟ್ ಗಳ ಮೇಲೆ ಶೇಕಡಾ 10ರಷ್ಟು ಹೆಚ್ಚಿನ ವಿದ್ಯತ್ ಬಳಕೆಯನ್ನು ಮಾಡಬಹುದ್ದಾಗಿದೆ. 
ಈ ಯೋಜನೆಯು ಗೃಹ ಬಳಕೆಯ ವಿದ್ಯುತ್  ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. 
ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಯಾಗಿರಬೇಕು.
ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳು ಗಳಿದ್ದರೆ , ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯ ಲಾಭ ಪಡೆಯಲು ಅರ್ಹ ಇರುತ್ತಾರೆ . 
ಪ್ರತಿ ಫಲಾನುಭವಿಯು ತನ್ನ ಕನೆಕ್ಷನ್ ಐಡಿ ಅನ್ನು ಆಧಾರ್ ಗೆ ಕಡ್ಡಾಯವಾಗಿ ಜೋಡಣೆ ಮಾಡುವುದು . 

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು. ?

ಆಧಾರ್ ಕಾರ್ಡ್ ಪ್ರತಿ . 
ವಿದ್ಯುತ್ ಸಂಪರ್ಕ ದಾಖಲಾತಿ / ವಿದ್ಯುತ್ ಬಿಲ್ ಪ್ರತಿ ಅದರಲ್ಲಿ ಕನೆಕ್ಷನ್ ಐಡಿ ಇರಬೇಕು . 
ಕರ್ನಾಟಕ ಖಾಯಂ ನಿವಾಸಿ ಪುರಾವೆ . 
ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬಾಡಿಗೆಯ ಕರಾರು  ಪತ್ರ. 

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ .?

ಗೃಹ ಜ್ಯೋತಿ ಯೋಜನೆಗೆ ಹೊಸ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ .ಹಾಗು , ಸೇವಾ ಸಿಂಧು ಪೋರ್ಟಲ್ ಮೂಲಕ, ಗ್ರಾಮ ಒನ್ ನಾಗರೀಕ ಸೇವಾ ಕೇಂದ್ರ ಮೂಲಕ , ಹಾಗು ಕರ್ನಾಟಕ ಒನ್ ಮೂಲಕ ಗ್ರಾಹಕರು ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಇದೆ ಜೂನ್ ೧೮ರಿಂದ ಪ್ರಾರಂಭಿಸಲಾಗುವುದು ಎಂದು ವೆಬಸೈಟ್ ನಲ್ಲಿ ಪ್ರಕಟಿಸಿದೆ . 

ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲದೆ.☝ 

https://sevasindhugs.karnataka.gov.in/




ಸ್ವತಃ ನೀವೇ ಅರ್ಜಿ ಸಲ್ಲಿಸಬೇಕು ಅನ್ನುವವರು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುವ ವಿಧಾನ 

ಹಂತ 1 : ಮೊದಲು ಸೇವಾ ಸಿಂಧು ಪೋರ್ಟಲ್ ಅನ್ನು ಓಪನ್ ಮಾಡ್ಕೋಬೇಕು . ಆಮೇಲೆ ಹೊಸ ಬಳಕೆದಾರರು ಇಲ್ಲಿ ಕ್ಲಿಕ್ ಮಾಡಿ ಅಂಥ ಇದೆ ಅಲ್ಲಿ ಕ್ಲಿಕ್ ಮಾಡಿ . 


ಹಂತ 2 : ನಂತರ ಸೇವಾ ಸಿಂಧು ನಲ್ಲಿ ನಿಮ್ಮ ಆಧಾರ್ ಮಾಹಿತಿ ಮತ್ತು ಮೊಬೈಲ್ ನಂಬರ್ ಇಮೇಲ್ ಐದೇ ಮಾಹಿತಿ ಹಾಕಿ ನಂತರ OTP  ಹಾಕಿ Validate ಮಾಡ್ಕೊಂಡು. ಹೊಸ password ನೀವೇ ಕ್ರಿಯೇಟ್ ಮಾಡ್ಕೊಳ್ಳಿ . 


ಹಂತ 3 : ಸೇವಾ ಸಿಂಧೂ ನಲ್ಲಿ ಹೊಸ ನೋಂದಣಿ ಆದಮೇಲೆ ಲಾಗಿನ್ ಮೇಲೆ ಕ್ಲಿಕ್ ಮಾಡಿ , ನಂತರ ನಿಮ್ಮ ವಿವರಗಳು ಅಂದರೆ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಹಾಕಿ ಆಮೇಲೆ, ನೋಂದಣಿ ಮಾಡುವಾಗ ನೀವೇ ಕ್ರಿಯೇಟ್ ಮಾಡಿರುವ ಪಾಸ್ವರ್ಡ್ ಹಾಕಿ, ಆಮೇಲೆ ಅಲ್ಲಿ ತೋರಿಸಿರುವ ನಂಬರ್ ಬಾಕ್ಸ್ ನಲ್ಲಿ ಹಾಕಿ , ಲಾಗಿನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ . 


ಹಂತ 4 : ನಂತರ ನಿಮಗೆ ಸೇವಾ ಸಿಂಧು ಸರ್ವಿಸ್ ಪ್ಲಸ್ ನ ಡ್ಯಾಶ್ ಬೋರ್ಡ್ ಬರುತ್ತೆ. ಅಲ್ಲಿ ಅಪ್ಲೈ ಫಾರ್ ಸರ್ವಿಸಸ್ ಅನ್ನೋ ಒಪ್ಶನ್ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ಸರ್ವಿಸಸ್ ಲಿಸ್ಟ್ ಬರುತ್ತೆ ಅದರಲ್ಲಿ ನೀವು ಸರ್ಚ್ ಮಾಡಿ. "ಗೃಹ  ಜ್ಯೋತಿ ಯೋಜನೆ" ಅಂಥ ಸರ್ಚ್ ಮಾಡಿ. 





ಹಂತ 5 : ಅರ್ಜಿ ಯಲ್ಲಿ ಕೇಳಿರುವ ವಿವರಗಳನ್ನು ಹಾಕಿ. ಆಧಾರ್ ಕಾರ್ಡ್ ಸಂಖ್ಯೆ , ವಿಳಾಸ ಕನೆಕ್ಷನ್ ಐಡಿ ಸಂಖ್ಯೆ . ಹಾಗು ವಿಳಾಸ ಪುರಾವೇ . ಎಲ್ಲ ವಿವರಗಳು ನಮೂದಿಸಿ ಕೊನೆಯದಾಗಿ ಅಗತ್ಯ ದಾಖಲಾತಿಗಳು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿ , ಅರ್ಜಿಯನ್ನು ಸಲ್ಲಿಸಿ .ಕೊನೆಯಲ್ಲಿ ಅರ್ಜಿ ಸ್ವೀಕೃತಿ ಪಡೆಯಿರಿ. . ಅರ್ಜಿ ಸ್ವೀಕೃತಿ ಯಿಂದ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ


ಈ ತರಹದ ಉಪಯೋಗವಾಗುವ ಮಾಹಿತಿಯನ್ನು ನಿಮ್ಮ ಸ್ನೇಹಿತರು , ಬಂಧು ಮಿತ್ರರೊಂದಿಗೆ ಹಂಚಿಕೊಳ್ಳಿ. . 


**** ಧನ್ಯವಾದಗಳು ****