Gruhalakshmi Pink Smart Card - ಗೃಹಲಕ್ಷ್ಮಿ ಪಿಂಕ್ ಸ್ಮಾರ್ಟ್ ಕಾರ್ಡ್


ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್ ಆಗಿರುವ ಗೃಹಲಕ್ಷ್ಮಿ ಪಿಂಕ್ ಸ್ಮಾರ್ಟ್ ಕಾರ್ಡ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿಸಿಕೊಡಲಾಗುತ್ತದೆ. ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ಪಿಂಕ್ ಸ್ಮಾರ್ಟ್ ಕಾರ್ಡ್ ಯಾವುದು..? ಈ ಪಿಂಕ್ ಸ್ಮಾರ್ಟ್ ಕಾರ್ಡ್ ಪಡೆಯುವುದು ಹೇಗೆ.? ಎಂಬುದರ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.  ಈ ರೀತಿಯ ಉಪಯುಕ್ತ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ಹಾಗೂ ನಮ್ಮ ಯುಟ್ಯೂಬ್ ಚಾನೆಲ್ ಅನ್ನು ಕೂಡ ನೀವು ಸಬ್ಸ್ಕ್ರೈಬ್ ಆಗಿ..



whatss

ಕಾಂಗ್ರೆಸ್ ಸರ್ಕಾರದ ಪ್ರಮುಖ ಖಾತರಿ ಯೋಜನೆಯಲ್ಲಿ ಒಂದಾಗಿರುವ ಗ್ರಹಲಕ್ಷ್ಮಿ ಯೋಜನೆ ಇದೇ ತಿಂಗಳು ಅಂದರೆ ಆಗಸ್ಟ್ 27ರಂದು ಬೆಳಗಾವಿಯಲ್ಲಿ ಚಾಲನೆ ನೀಡಲಾಗುವುದು. ಅಂದಿನಿಂದ ಮನೆಯ ಯಜಮಾನಿಯವರ ಖಾತೆಗೆ ನೇರವಾಗಿ 2000 ಹಣ ವರ್ಗಾವಣೆ ಯಾಗಲಿದೆ ಎಂದು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ನಿನ್ನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹಾಗೂ ಗೃಹಲಕ್ಷ್ಮಿ ಯೋಜನೆಯ ಪಿಂಕ್ ಸ್ಮಾರ್ಟ್ ಕಾರ್ಡ್  ಕೂಡ  ನೀಡುವುದಾಗಿ ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಪಿಂಕ್ ಸ್ಮಾರ್ಟ್ ಕಾರ್ಡ್


ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಪಿಂಕ್ ಸ್ಮಾರ್ಟ್ ಕಾರ್ಡ್ ಅನ್ನು ನೀಡಲಾಗುತ್ತದೆ ಈ ಪಿಂಕ್ ಸ್ಮಾರ್ಟ್ ಕಾರ್ಡ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರ ಡಿಸಿಎಂ ಡಿಕೆ ಶಿವಕುಮಾರ್ ಅವರ ಭಾವಚಿತ್ರ ಹಾಗೂ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ಅವರ ಭಾವಚಿತ್ರ ಇರಲಿದೆ.  ಅದರ ಜೊತೆಗೆ ಫಲಾನುಭವಿಗಳ ವಿವರ ಕೂಡ ಈ ಒಂದು ಪಿಂಕ್ ಸ್ಮಾರ್ಟ್ ಕಾರ್ಡ್ ನಲ್ಲಿ ಇರಲಿದೆ. ಹಾಗೆ ಈ ಒಂದು ಪಿಂಕ್ ಸ್ಮಾರ್ಟ್ ಕಾರ್ಡ್ ನಲ್ಲಿ ರೂಪಾಯಿ 2000/- ಎಂದು ಸ್ಮಾರ್ಟ್ ಕಾರ್ಡ್ ನಲ್ಲಿ ನಮಗಿಸಲಾಗಿದೆ. 

ಗೃಹಲಕ್ಷ್ಮಿ ಪಿಂಕ್ ಸ್ಮಾರ್ಟ್ ಕಾರ್ಡ್ ಪಡೆಯುವುದು ಹೇಗೆ.?


ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಇಲ್ಲಿ ತನಕ 1.05 ಕೋಟಿ ಜನರು ಈಗಾಗಲೇ ಅರ್ಜಿ ನೋಂದಾಯಿಸಿದ್ದಾರೆ . ಇನ್ನು ಕೂಡ ಅರ್ಜಿ ಯಾರು ಸಲ್ಲಿಸಿಲ್ಲ ಅವರು ಅರ್ಜಿಯನ್ನ ನೋಂದಣಿ ಮಾಡಬಹುದಾಗಿದೆ.  ಅರ್ಜಿ ನೋಂದಣಿ ಮಾಡಿದವರಿಗೆ ಗೃಹ ಲಕ್ಷ್ಮಿ ಯೋಜನೆಯ ಪಿಂಕ್ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ




ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವ ದಿನಾಂಕ

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಸಲ್ಲಿಸಿದವರಿಗೆ ಪ್ರತಿ ತಿಂಗಳು ರೂಪಾಯಿ 2000ಗಳನ್ನ ಇದೇ ತಿಂಗಳು ಅಂದರೆ ಆಗಸ್ಟ್ 27ರಂದು ನೇರವಾಗಿ ಡಿಪಿಟಿ ಮೂಲಕ ಯೋಜನೆಯ ಫಲಾನುಭವಿಗಳಿಗೆ ಖಾತೆಗೆ ಜಮಾ ಆಗಲಿದೆ.



ರಾಜ್ಯದ 11 ಸಾವಿರ  ಕಡೆ ಏಕಕಾಲಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ.  ಎಲ್ಲಾ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆಗಳಲ್ಲಿ ಉದ್ಘಾಟನಾ  ಸಮಾರಂಭಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.  ಪಂಚಾಯತಿಗೊಬ್ಬರು ನೂಡಲ್ ಆಫೀಸರ್ ಅನ್ನು ನೇಮಕ ಮಾಡಿದ್ದು ಪಕ್ಷತೀತವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಮಾಡಲಾಗುತ್ತಿದೆ.  ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಉಪಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ಅವರು ಮನವಿ ಮಾಡಿದರು.


tel share transformed

ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ ಧನ್ಯವಾದಗಳು.

****** ಧನ್ಯವಾದಗಳು ********


ಇದನ್ನು ಓದಿ  :