ಹಳೆಯ ರೇಷನ್ ಕಾರ್ಡ್ ರದ್ದಾದರೆ ಮಾತ್ರ ಹೊಸ ಪಡಿತರ ವಿತರಣೆ : ಸರ್ಕಾರದ ಹೊಸ ರೂಲ್ಸ್
ಹಾಯ್ ಸ್ನೇಹಿತರೆ ಈ ಒಂದು ಲೇಖನದಲ್ಲಿ ಏನು ಮಾಹಿತಿ ತಿಳಿಸುತ್ತಿದ್ದೇವೆ ಅಂತ ಅಂದ್ರೆ, ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನ ಸಲ್ಲಿಸಿದವರಿಗೆ ಹಾಗೂ ಹೊಸ ರೇಷನ್ ಕಾರ್ಡನ್ನು ಪಡೆಯಬೇಕು ಎಂದು ಕಾಯುತ್ತಿರುವ ಜನರಿಗೆ ಸರ್ಕಾರದ ಕಡೆಯಿಂದ ಹೊಸದಾಗಿ ರೂಲ್ಸ್ ಅನ್ನ ಬಿಡುಗಡೆ ಮಾಡಿದ್ದಾರೆ.ಅದುವೇ ಹಳೆಯ ಪಡಿತರ ಕಾರ್ಡ್ ರದ್ದಾದರೆ ಮಾತ್ರ ಹೊಸ ರೇಷನ್ ಕಾರ್ಡಿಗೆ ಅಪ್ರುವಲ್ ಮಾಡಲಾಗುವುದು ಎಂದು ಹೊಸ ರೂಲ್ಸ್ ಅನ್ನ ತಿಳಿಸಿದ್ದಾರೆ.ಬನ್ನಿ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ.
ಸರ್ಕಾರದ ಹೊಸ ರೂಲ್ಸ್ :
ಹೊಸ ರೇಷನ್ ಕಾರ್ಡುಗಳನ್ನು ವಿತರಿಸಬೇಕಾದರೆ ಅದೇ ಪ್ರಮಾಣದಲ್ಲಿ ಹಳೆಯ ಪಡಿತರ ಚೀಟಿಗಳನ್ನು ರದ್ದು ಪಡಿಸಬೇಕು. ಒಟ್ಟಾರೆ ಈಗಿರುವ ಪಡಿತರ ಕಾಡುಗಳ ಸಂಖ್ಯೆ ಹೆಚ್ಚುವಂತಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆದೇಶವು ಅಧಿಕಾರಿಗಳಿಗೆ ಇಕ್ಕಟ್ಟಿಗೆ ಸಿಲುಕಿಸಿದೆ. ರಾಜ್ಯದಲ್ಲಿ 10.88 ಅಂಥೋದಯ ಮತ್ತು 1.16 ಕೋಟಿ ಬಿಪಿಎಲ್ ಕಾರ್ಡುದಾರರು ಇದ್ದಾರೆ.
ಹೊಸ ಬಿಪಿಎಲ್ ಪಡಿತರ ಚೀಟಿ ಗಾಗಿ 2,95,000 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ಅವರು ತಿಳಿಸಿದ್ದಾರೆ ಅವರು ಹೇಳಿಕೆ ನೀಡಿದ ಬೆನ್ನೆಲೆ ಇಲಾಖೆ ಹೊಸ ಆದೇಶ ಹೊರಡಿಸಿದೆ. ಒಟ್ಟು 2,95 ಲಕ್ಷ ಪೈಕಿ 2.78 ಲಕ್ಷ ಅರ್ಜಿಗಳು ಸ್ಥಳ ಪರಿಶೀಲನೆ ನಡೆದಿದೆ. 2,28 ಅರ್ಜಿಗಳು ಅಹ್ರವೆಂದು ಕಂಡುಬಂದಿವೆ, ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು 27,486 ಅರ್ಜಿಗಳು ಸಲ್ಲಿಕೆಯಾಗಿದೆ
ಯಾರ ಪಡಿತರ ಚೀಟಿ ರದ್ದು
ಸತತ ಆರು ತಿಂಗಳಿಂದ ನಿರಂತರವಾಗಿ ಪಡಿತರ ಪಡೆಯದೆ ಅಂಥೋದಯಾ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಲು ಆದ್ಯತೆ ಮೇರೆಗೆ ಸೂಚಿಸಲಾಗಿದೆ. ಅನರ್ಹರು ಪಡಿತರ ಚೀಟಿಗಳನ್ನು ಪಡೆದ ಬಗ್ಗೆ ದೂರುಗಳಿದ್ದು, ಪರಿಶೀಲಿಸಿ ಅಂತವರ ಕಾಡುಗಳನ್ನುಕೂಡ ರದ್ದುಪಡಿಸಲು ತಿಳಿಸಲಾಗಿದೆ.
ರಾಜ್ಯದಲ್ಲಿರುವ ಒಟ್ಟು ಪಡಿತರ ಚೀಟಿದಾರರ ಪೈಕಿ 14826 ಅಂತೋದಯ ಮತ್ತು 3.32ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರು ಸತತ ಆರು ತಿಂಗಳಿಂದ ಆಹಾರ ಧಾನ್ಯ ಪಡೆದಿರುವುದನ್ನು ಗೊತ್ತಾಗಿದೆ.
ಸರ್ಕಾರದ ಸೂಚನೆ
ಬಿಪಿಎಲ್ ಮತ್ತು ಅಂಥೋದಯ ಪಡಿತರಗಳ ಚೀಟಿಗಳನ್ನು ಆದರದ ಮೇಲೆಯೇ ಸರ್ಕಾರದ ಖಾತ್ರಿ ಯೋಜನೆಗಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ, ಆರೋಗ್ಯ ಇಲಾಖೆಯ ಆಯುಷ್ಮಾನ್ ಆರೋಗ್ಯ ಚಿಕಿತ್ಸೆಯ 5 ಲಕ್ಷ ವೆಚ್ಚದ ಯೋಜನೆ ಹಾಗೂ ವಿವಿಧ ಇಲಾಖೆಗಳ ಸಾಲ ಸೌಲಭ್ಯ ಯೋಜನೆಗಳ ಸೌಲಭ್ಯ ಪಡೆಯಲು ಪಡಿತರ ಕಾರ್ಡ್ ಬಹು ಮುಖ್ಯ ಪಾತ್ರ ವಹಿಸಿದೆ
ಹೀಗಾಗಿ ಪಡಿತರ ಕಾಡುಗಳು ಹೆಚ್ಚಳವಾದರೆ ಸರ್ಕಾರಕ್ಕೂ ಹೊರೆ ಆಗುವ ಕಾರಣ ಪಡಿತರ ಕಾಡುಗಳನ್ನು ಸಂಖ್ಯೆ ಹೆಚ್ಚಳವಾಗದಂತೆ ನೋಡಿಕೊಳ್ಳಲು ಸೂಚಿಸಿದೆ
ರೇಷನ್ ಕಾರ್ಡುಗಳು ರದ್ದಾಗಿದೆ ಎಂದು ತಿಳಿಯುವುದು ಹೇಗೆ .?
ಮೊದಲೇ ತಿಳಿಸಿದಂತೆ ರೇಷನ್ ಕಾರ್ಡ್ ಗಳು ಈಗ ತುಂಬಾ ಅಗತ್ಯವಾದ ದಾಖಲೆಯಾಗಿದ್ದು ಕೆಲವು ಜನರು ಹೊಸ ರೇಷನ್ ಕಾರ್ಡಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಇನ್ನು ಹಲವು ಜನರು ಅರ್ಜಿ ಸಲ್ಲಿಸಲು ತುದಿಗಳಲ್ಲಿ ನಿಂತಿದ್ದಾರೆ ಹಾಗಾದ್ರೆ ಬನ್ನಿ ಸರ್ಕಾರದ ಹೊಸ ರೂಲ್ಸ್ ಪ್ರಕಾರ ನಿಮ್ಮ ಹಳೆಯ ರೇಷನ್ ಕಾರ್ಡ್ ರದ್ದು ಆಗಿದೇನ ಇಲ್ಲವೆಂದು ತಿಳಿಯುವುದು ಹೇಗೆ ಅಂಥ ಹಂತ ಹಂತವಾಗಿ ತಿಳಿದುಕೊಳ್ಳಿ.
ಹಂತ 1: ಮೊದಲು ನಿಮ್ಮ ಫೋನ್ನಲ್ಲಿ ಅಥವಾ ಲ್ಯಾಪ್ಟಾಪ್ ನಲ್ಲಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗಿದೆ ಅದಕ್ಕಾಗಿ ಈ ಕೆಳಗಿನ ಲಿಂಕ್ ಅನ್ನು ಬಳಕೆ ಮಾಡಬಹುದಾಗಿದೆ ನಂತರ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಈ ಸರ್ವಿಸ್ ( E-Services ) ಎಂಬ ವಿಭಾಗ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
👇👇👇👇👇👇👇👇👇👇👇
https://ahara.kar.nic.in/Home/EServices
ಹಂತ 2: ಇದಾದ ಬಳಿಕ ನಿಮಗೆ ಹಲವಾರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ ಈ ಭಾಗದಲ್ಲಿ ಈ ರೇಷನ್ (e_Ration Card ) ಕಾರ್ಡ್ ಮೇಲೆ Click ಮಾಡಿ ಆಗ ನಂತರ ನಿಮಗೆ ( Show Cancelled or Suspended Ration Card List ) ರದ್ದುಪಡಿಸಿದ ಅಥವಾ ಅಮಾನತುಗೊಳಿಸಿದ ಪಟ್ಟಿಗಳನ್ನು ತೋರಿಸಿ ಎಂಬ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಹಂತ 3: ಈ ಎಲ್ಲಾ ಕೆಲಸ ಮಾಡಿದ ಮೇಲೆ ನಿಮಗೆ ಹೊಸ ವಿಭಾಗ ಕಾಣಿಸಿಕೊಳ್ಳಲಿದ್ದು ಅಲ್ಲಿ ನಿಮಗೆ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ತಿಂಗಳು ವರ್ಷ ಎಂಟ್ರಿ ಮಾಡ್ಲಿಕ್ಕೆ ಕೇಳುತ್ತದೆ ಅಲ್ಲಿ ಹೇಳಿರುವ ಹಾಗೆ ನಿಮ್ಮ ಮಾಹಿತಿಯನ್ನು ಎಂಟ್ರಿ ಮಾಡಿ .
ಹಂತ 4: ನಂತರ GO ಅನ್ನೋ ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಆ ತಾಲೂಕಿನ ಆ ವರ್ಷದ ಆ ತಿಂಗಳಿನ ರದ್ದು ಪಡಿಸಿದ ಪಡಿತರ ಕಾಡುಗಳ ಸಂಖ್ಯೆ ಮತ್ತು ಹೆಸರು ಕಾಣಿಸಿಕೊಳ್ಳುತ್ತವೆ ಅದರಲ್ಲಿ ನಿಮ್ಮ ಹೆಸರು ಇದೇನಾ ಇಲ್ಲ ಅಂತ ಚೆಕ್ ಮಾಡಿಕೊಳ್ಳಿ.
ಉತ್ತಮ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತರಿಗೆ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ. ಧನ್ಯವಾದಗಳು.
************************************ ಲೇಖನ ಮುಕ್ತಾಯ **********************************************
3 Comments
hi
ReplyDeleteHi
ReplyDeleteHi
ReplyDelete