ಗೃಹಲಕ್ಷ್ಮಿ ಅರ್ಜಿಯ ಸ್ಥಿತಿ ಚೆಕ್ ಮಾಡುವುದು ಹೇಗೆ.? | Gruhalakshmi Scheme Application Status Check. 




ನಮಸ್ಕಾರ ಸ್ನೇಹಿತರೇ. ಈ ಒಂದು ಲೇಖನದಲ್ಲಿ, ಗೃಹ ಲಕ್ಷ್ಮಿ ಯೋಜನೆಗೆ (Gruhalakshmi Scheme) ಸಲ್ಲಿಸಿರುವ ಅರ್ಜಿಗಳ ಸ್ಥಿತಿಯನ್ನು (Status) ತಿಳಿದುಕೊಳ್ಳುವ ವಿಧಾನ ಬಗ್ಗೆ ಮಾಹಿತಿ ಸಿಗಲಿದೆ.

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕರ್ನಾಟಕ ಸರ್ಕಾರದ ಖಾತರಿ ಯೋಜನೆಗಳಲ್ಲಿ, ಒಂದಾದ ಗೃಹ ಲಕ್ಷ್ಮಿ ಯೋಜನೆಯು ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ₹2000/- ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ಬಹುದೊಡ್ಡ ಯೋಜನೆಯಾಗಿದೆ.

ಗೃಹ ಲಕ್ಷ್ಮಿ ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 20ರಿಂದ ಪ್ರಾರಂಭವಾಗಿದೆ.

ಈಗ ಎಲ್ಲಾ ಮನೆಯ ಯಜಮಾನಿಯರು ತಮ್ಮ ಹತ್ತಿರದ ಬಾಪೂಜಿ ಸೇವಾ ಕೇಂದ್ರ, ಅಥವಾ ಗ್ರಾಮ ಒನ್ ಕೇಂದ್ರ, ಅಥವಾ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ಹೋಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ನೀವು ಕೂಡ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಯನ್ನು ಸಲ್ಲಿಸಿದಲ್ಲಿ, ನಿಮಗೇನಾದರೂ ಸಂಶಯ ಇತ್ತು ಅಂದ್ರೆ , ನೀವು ಸಲ್ಲಿಸಿರುವ ಗೃಹ ಲಕ್ಷ್ಮಿ ಅರ್ಜಿಯ ಸ್ಟೇಟಸ್ ಅನ್ನು ಚೆಕ್ ಮಾಡಿಕೊಂಡು ಮುಂದಿನ ಮೊದಲ ಕಂತಿನ ಹಣ ಪಡೆಯಲು ಸಿದ್ಧರಾಗಿ.

ಅದರ ಜೊತೆಗೆ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ, ಕೆಲ ಕಾರಣಗಳಿಂದ ಅರ್ಜಿ ಸರಿಯಾಗಿ ಸಲ್ಲಿಸಲು ತೊಂದ್ರೆ ಆಗಿದ್ದರೆ, ಅಥವಾ ನಿಮಗೆ ಮಂಜೂರಾತಿ ಪತ್ರ ಬರದೆ ಇದ್ದರೆ, ನೀವು ಈ ವಿಧಾನ ಮೂಲಕ ನಿಮ್ಮ ಗೃಹ ಲಕ್ಷ್ಮಿ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಿ. 

ಇದೇ ರೀತಿಯ ಎಲ್ಲಾ ಸರ್ಕಾರಿ ಯೋಜನೆಗಳ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ. 👉ಕ್ಲಿಕ್ ಮಾಡಿ. 

 

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರ ಅರ್ಜಿಯ ಸ್ಥಿತಿ ( Status) ಚೆಕ್ ಮಾಡುವ ವಿಧಾನ : 

ಹಂತ 1: ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಅನ್ನು ಓಪನ್ ಮಾಡಿಕೊಂಡು, ಸೇವಾ ಸಿಂಧು ಖಾತರಿ ಯೋಜನೆಗಳ ವೆಬ್ ಸೈಟ್ ಅನ್ನು ಓಪನ್ ಮಾಡಿಕೊಳ್ಳಿ. ಅಥವಾ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

👉CLICK HERE 


ಹಂತ 2: ನಂತರ, ಇದರಲ್ಲಿ ಕೇಳಿರುವ ನಿಮ್ಮ ಪಡಿತರ ಚೀಟಿಯ ಸಂಖ್ಯೆ ( Ration Card Number) ಅನ್ನು ಕೇಳಲಾಗಿದೆ, ಹಾಗಾಗಿ ನಿಮ್ಮ 12 ಸಂಖ್ಯೆಯ ಪಡಿತರ ಚೀಟಿಯ ಸಂಖ್ಯೆ ಯನ್ನೂ ಅಲ್ಲಿ ನಮೂದಿಸಿ, ಮುಂದುವರೆದು, RC ವಿವರಗಳನ್ನು ಪಡೆದುಕೊಳ್ಳಿ ಎಂಬ ಆಯ್ಕೆಯ ಬಟನ್ ಮೇಲೆ ಕ್ಲಿಕ್ ಮಾಡಿ.

 

 

ಹಂತ 3: ಕ್ಲಿಕ್ ಮಾಡಿದ ನಂತರ , ಮೇಲ್ಗಡೆ ಒಂದು popup message ಬರುತ್ತೆ, ನಿಮ್ಮ ಅರ್ಜಿ ಏನಾದರೂ ಸಲ್ಲಿಕೆ ಆಗಿದ್ದರೆ, "Application for this RC Number Already Recieved" ಅಂಥ, ಆತರ ಬಂದ್ರೆ ನಿಮ್ಮ ಅರ್ಜಿ 100% ಸಲ್ಲಿಕೆ ಆಗಿದೆ ಅಂಥ ಅರ್ಥ.

 

ಹಂತ 4: ಒಂದು ವೇಳೆ , ನಿಮ್ಮ ಅರ್ಜಿ ಗೃಹ ಲಕ್ಷ್ಮಿ ಯೋಜನೆಗೆ ಸಲ್ಲಿಸಿಲ್ಲವೆಂದರೆ , ಅಲ್ಲಿ ಈರೀತಿ ಮೆಸೇಜ್ ಬರುತ್ತೆ, "RC data yet to be scheduled.Please check after one week" ಅಂಥ ಬರುತ್ತೆ. ಹೀಗೆ ಬಂದರೆ, ಇನ್ನೂ ನಿಮ್ಮ ಅರ್ಜಿ ಸಲ್ಲಿಸಿಲ್ಲ ಅಂದು ಅರ್ಥ.



ಹೀಗೆ ನೀವು ಗೃಹ ಲಕ್ಷ್ಮಿ ಯೋಜನೆಯ ಅರ್ಜಿಯ ಸ್ಟೇಟಸ್ ಅನ್ನು ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ.

ಇಂತಹ ಉಪಯಕ್ತ ಮಾಹಿತಿಯ ಈ ಪೋಸ್ಟ್ ಅನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧುಗಳಿಗೆ ಶೇರ್ ಮಾಡಿ.


****** ಧನ್ಯವಾದಗಳು ********


ಇದನ್ನು ಓದಿ  :