"ಶಕ್ತಿ  ಸ್ಮಾರ್ಟ್ ಕಾರ್ಡ್" ಪಡೆಯುವುದು ಹೇಗೆ.? "Shakti Smart  Card" Online Apply 


ನಮಸ್ಕಾರ ಸ್ನೇಹಿತರೆ , ಹೇಗಿದ್ದೀರಿ.?  ಸರ್ಕಾರವು ಮಹಿಳೆಯರಿಗೆ  ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣ ಮಾಡಲು ಉಚಿತ ಬಸ್ ಯೋಜನೆ ಮಾಡಿದ್ದೂ.ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬೇಕಾದರೆ, "ಶಕ್ತಿ ಸ್ಮಾರ್ಟ್ ಕಾರ್ಡ್" ಇರಬೇಕಾಗುತ್ತದೆ.  ಹಾಗಾದರೆ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯುವುದು ಹೇಗೆ.? ಅದಕ್ಕೆ ಅರ್ಜಿ ಎಲ್ಲಿ ಸಲ್ಲಿಸಬೇಕು.? ಅರ್ಜಿ ಸಲ್ಲಿಸಲು ಬೇಕಾಗಿರುವ  ದಾಖಲಾತಿಗಳು ಯಾವವು ? ಅಂಥ ತಿಳಿಸಿಕೊಡುತ್ತೇನೆ.

ಶಕ್ತಿ ಸ್ಮಾರ್ಟ್ ಕಾರ್ಡ್ ಯಾಕೆ ಬೇಕು. ?

ಕರ್ನಾಟಕ ರಾಜ್ಯ ಸರ್ಕಾರವು ಘೋಷಣೆ ಮಾಡಿದ್ದ ೫ ಗ್ಯಾರೆಂಟಿಗಳಲ್ಲಿ ಇದು ಕೂಡ ಒಂದಾಗಿದ್ದು , ಕರ್ನಾಟಕದ ಮಹಿಳೆಯರು ಜೂನ್ ೧೧ ರಿಂದ ರಾಜ್ಯಾದ್ಯಾಂತ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಯೋಜನೆ ಮಾಡಿದ್ದೂ, ಮಹಿಳೆಯರು ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ತಮ್ಮ ಹತ್ತಿರ ಹೊಂದಿರಬೇಕಾಗುತ್ತದೆ. ಇಲ್ಲವಾದರೆ ಉಚಿತ ಪ್ರಯಾಣ ಮಾಡಲು ಸಾಧ್ಯವಾಗದು.  ಮಹಿಳೆಯರು ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ . ಇದಕ್ಕೆ ಮೂರೂ ತಿಂಗಳು ಕಾಲಾವಕಾಶ ಇರುವುತ್ತದೆ. 

ಶಕ್ತಿ ಸ್ಮಾರ್ಟ್ ಕಾರ್ಡ್ ಅರ್ಜಿ ಸಲ್ಲಿಸುವುದು ಹೇಗೆ.?

ಮಹಿಳೆಯರು ತಮ್ಮ ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಬೇಕಾಗಿದ್ದು , ಕಾರ್ಡ್ ಅನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅದುವೇ "ಸೇವಾ ಸಿಂಧು" ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು. 


ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಬೇಕಾಗುವ ದಾಖಲಾತಿಗಳು .?

೧.ಆಧಾರ್ ಕಾರ್ಡ್ ಪ್ರತಿ 
೨.ಪಾಸ್ಪೋರ್ಟ್ ಸೈಜ್ ಫೋಟೋ 
೩.ರಾಜ್ಯ ನಿವಾಸಿ ಪುರಾವೆ 

ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುವುದು ಹೇಗೆ.?

ಹಂತ ೧ : ಮೊದಲು ಸೇವಾ ಸಿಂಧು ಪೋರ್ಟಲ್ ಅನ್ನು ಓಪನ್ ಮಾಡಿಕೊಳ್ಳಬೇಕು . ವೆಬ್ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ .  Seva Sindhu Website ನಂತರ ಲಾಗಿನ್ ಮಾಡಲು ಇಲ್ಲಿ ಕ್ಲಿಕ್ ಮಾಡಲು ಬಟನ್ ಮೇಲೆ ಕ್ಲಿಕ್ ಮಾಡಿ 


ಹಂತ ೨ : ಲಾಗಿನ್ ಒಪ್ಶನ್ ಮೇಲೆ ಕ್ಲಿಕ್ ಮಾಡಿ , ಅಲ್ಲಿ ಕೇಳುವ ಮಾಹಿತಿ ನೀಡಿ ಲಾಗಿನ್ ಆಗಿ. 

ಹಂತ ೩ : ನಂತರ ಲಾಗಿನ್ ಆದಮೇಲೆ ಡ್ಯಾಶ್ ಬೋರ್ಡ್ ಬರುತ್ತೆ. ಆಮೇಲೆ menu ಕೆಳಗಡೆ apply services ಒಪ್ಶನ್ ಮೇಲೆ ಕ್ಲಿಕ್ ಮಾಡಿ. 

ಹಂತ ೪ : ಅಲ್ಲಿ search ಹತ್ತಿರ ಕ್ಲಿಕ್ ಮಾಡಿ ಶಕ್ತಿ ಸ್ಮಾರ್ಟ್ ಕಾರ್ಡ್ ಅಂಥ  search ಮಾಡಿ. ಅಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ವಿಸ್ ಸಿಗುತ್ತೆ . ಸೆಲೆಕ್ಟ್ ಮಾಡ್ಕೊಂಡು ಅರ್ಜಿ ಸಲ್ಲಿಸಿ . ನಂತರ ನಿಮಗೆ ಶಕ್ತಿ ಸ್ಮಾರ್ಟ್ ಕಾರ್ಡ್ ದೊರೆಯುತ್ತದೆ. ಈ ರೀತಿಯಾಗಿ ನೀವು ಸೇವಾ ಸಿಂಧು ಪೋರ್ಟಲ್ ಮೂಲಕ ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಪಡೆಯಬಹುದು .. 

ವಿಡಿಯೋ ನೋಡಲು ಇಲ್ಲಿ ಕ್ಲಿಕ್ಲ್ ಮಾಡಿ 




ಈ ತರಹದ ಉಪಯುಕ್ತ ಮಾಹಿತಿಗಾಗಿ ನಮ್ಮ ಪೇಜ್ ಅನ್ನು fallow ಮಾಡಿ