ಅನ್ನಭಾಗ್ಯ ಯೋಜನೆ : ಪ್ರತಿ ಕೆಜಿ ಅಕ್ಕಿಗೆ 34ರೂಪಾಯಿ ನಂತೆ ಫಲಾನುಭವಿಯ  ಬ್ಯಾಂಕ್ ಖಾತೆಗೆ ನೇರವಾಗಿ ಮೊತ್ತ ಜಮಾ. 

ನಮಸ್ಕಾರ ಸ್ನೇಹಿತರೆ , ಸರ್ಕಾರದ ಖಾತರಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ , ಪಡಿತರ ಚೀಟಿ ಹೊಂದಿದ್ದ ಪ್ರತಿ ಒಬ್ಬರಿಗೂ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಅನುಮೋದನೆ ಕೂಡ ನೀಡಿತ್ತು . ಅದರಂತೆ  ಜೂಲೈ ತಿಂಗಳಿಂದ ಪ್ರಾರಂಭ ಆಗುವ ಅಣ್ಣ ಭಾಗ್ಯ ಯೋಜನೆ. ಸದ್ಯಕ್ಕೆ 10ಕೆಜಿ ನೀಡಲು ಸಾಧ್ಯವಾಗಲು ಆಗದೆ ಇದ್ದ ಕಾರಣ , ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾದರೆ ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ . 


ಅನ್ನಭಾಗ್ಯ ಯೋಜನೆ :

ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಹೆಚ್ಚ್ಚುವರಿಯಾಗಿ 5 ಕೆಜಿ ಅಕ್ಕಿ ವಿತರಣೆ ಮಾಡುವುದಾಗಿ ನೀಡಿದ ಭರವಸೆಯನು ಈರೇಡಿಸಲು ಹರಸಾಹಸ ಪಡುತ್ತಿರುವ ಸರ್ಕಾರ , ಅನ್ನ ಭಾಗ್ಯ ಯೋಜನೆ ಅನುಷ್ಠಾನಗೊಳಿಸಲು ಹೊಸ ಕಂಡುಕೊಂಡಿದೆ . ಭರವಸೆ ಉಳಿಸಿಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ವನ್ನು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ . 
ಬಿಪಿಲ್ ರೇಷನ್ ಕಾರ್ಡ್ ದವರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದೇವು. ಇದಕ್ಕಾಗಿ ಹೆಚ್ಚುವರಿಯಾಗಿ 2.29 ಲಕ್ಷ ಮೆಟ್ರಿಕ್ ಟಾನ್ ಅಕ್ಕಿ ಅಗತ್ಯವಿಎ , ಅಷ್ಟು ಅಕ್ಕಿ ನಮಗೆ ದೊರೆಯುತ್ತಿಲ್ಲ , ಹೀಗಾಗಿ 5 ಕೆಜಿ ಅಕ್ಕಿ ಬದಲು ಪ್ರತಿ ಕೆಜಿ ಅಕ್ಕಿ ಗೆ 34ರೂಪಾಯಿ ಯಂತೆ ಜನರಿಗೆ ನೀಡಲು ನಿರ್ಧಾರ ಮಾಡಲಾಗಿದೆ. ಬಿಪಿಲ್ ರೇಷನ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬರಿಗೆ ಮಾಸಿಕ 170ರೂಪಾಯಿ ನೀಡಲಾಗುತ್ತದೆ. 

ಯಾವಾಗಿನಿಂದ ಬ್ಯಾಂಕ್ ಖಾತೆಗೆ ಹಣ ಜಮೆ :

ಜೂಲೈ 1ರಿಂದಲೇ ಅನ್ವಯವಾಗುವಂತೆ ಪಡಿತರದಾರರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಲಿದೆ . 

ಎಲ್ಲಿವರೆಗೂ ಬ್ಯಾಂಕ ಖಾತೆಗೆ ಹಣ ಜಮಾ :

ಅಕ್ಕಿ ಸಿಗುವವರೆಗೂ ಪರ್ಯಾಯ ವ್ಯವಸ್ಥೆಯಾಗಿ ಹಣ ನೀಡುತ್ತಿದ್ದೇವೆ , ಅಕ್ಕಿ ಸಿಕ್ಕ ನಂತರ ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಸಂಪುಟ ಸಭೆಯ ನಿರ್ಧಾರ ಕುರಿತು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. 


ಖಾತೆಗೆ ಎಷ್ಟು ಮೊತ್ತ :

  •  ಪ್ರತಿ ಫಲಾನುಭವಿಗೆ ಒಂದು ಕೆಜಿ ಗೆ 34 ರೂಪಾಯಿ ನಂತೆ ಐದು ಕೆಜಿ ಗೆ 170 ರೂಪಾಯಿ ನೀಡಲಾಗುತ್ತದೆ . 
  • ಬಿ ಪಿ ಲ್ ಕಾರ್ಡ್ ನಲ್ಲಿ ಇಬ್ಬರೂ ಹೆಸರಿದ್ದರೆ ಒಬ್ಬರಿಗೆ 170ರೂಪಾಯಿ ನಂತೆ ಇಬ್ಬರಿಗೆ 340ರೂಪಾಯಿ  ಜಮಾ ಮಾಡಲಾಗುತ್ತದೆ . 
  • ಬಿ ಪಿ ಲ್  ಕಾರ್ಡ್ ನಲ್ಲಿ ನಾಲ್ಕು ಸದ್ಯಸರು ಇದ್ದರೇ ಒಬ್ಬರಿಗೆ 170ರೂಪಾಯಿ ನಂತೆ ನಾಲ್ವರಿಗೆ 680ರೂಪಾಯಿ ಜಮಾ ಮಾಡಲಾಗುತ್ತದೆ . 
  • ರೇಷನ್ ಕಾರ್ಡ್ ನಲ್ಲಿ ಐದು ಸದ್ಯಸ್ಸರು ಇದ್ದರೇ ಒಬ್ಬರಿಗೆ 170ರೂಪಾಯಿ ನಂತೆ ಐವರಿಗೆ 850ರೂಪಾಯಿ ಹಣ ಜಮಾ ಮಾಡಲಾಗುತ್ತದೆ . 

APPLY NOW

ಅನ್ನ ಭಾಗ್ಯ ಯೋಜನೆಯ ಅಕ್ಕಿ ಬದಲಿಗೆ ಹಣ ಪಡೆಯಲು ಈ ಕೆಲಸ ಕಡ್ಡಾಯವಾಗಿ ಮಾಡಿ :

ಮೊದಲು ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಸೀಡಿಂಗ್ ಆಗಿದೆನಾ ಇಲ್ಲ ಅಂಥ ತಿಳಿದುಕೊಳ್ಳಿ . ಹಾಗಾದರೆ ಮನೆಯಲ್ಲೇ ಕುಳಿತು ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಸೀಡಿಂಗ್ ಆಗಿದೇನಾ ಇಲ್ಲ ಅಂಥ ತಿಳಿವುಕೊಳ್ಳ ಬಹುದು . ಹಾಗಾದರೆ ಈರೀತಿ ಮಾಡಿ 

ಹಂತ 1 : ಕೆಳಗೆ ಕೊಟ್ಟಿರುವ ವೆಬ್ಸೈಟ್ ಗೆ ಹೋಗಿ ಆಮೇಲೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ. ನಂತರ ಸೆಕ್ಯೂರಿಟಿ ಕೋಡ್ ಹಾಕಿ ಆಮೇಲೆ ಒಟಿಪಿ ಕಳಿಸಿ . ಒಟಿಪಿ ಬಂದಮೇಲೆ ಒಟಿಪಿ ಹಾಕಿ. 

ಹಂತ 2 : ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಒಟಿಪಿ ಬಂದಿರುತ್ತೆ ಅದನ್ನ ಹಾಕಿ. ಆಮೇಲೆ ಕೆಳಗಡೆ ಸಬ್ಮೀಟ್ ಅಂಥ ಒಪ್ಶನ್ ಮೇಲೆ ಕ್ಲಿಕ್ ಮಾಡಿ. 

ಹಂತ 3
: ಅವಾಗ ನಿಮಗೆ ಗಾಟಾ ಆಗುತ್ತೆ , ನಿಮ್ಮ ಆಧಾರ್ ಸೀಡಿಂಗ್ ಯಾವ್ ಅಬ್ಯಾಂಕ್ ಅಕೌಂಟ್ ಸೀಡೀಗ್ ಆಗಿದೆ. ಮಾತು ಅದು ಆಕ್ಟಿವ್ ಇದೇನಾ ಅಥವಾ ಇನಕ್ಟಿವ್ ಇದೇನಾ ಅಂಥ . ಒಂದು ವೇಳೆ ಅಲ್ಲಿ ಯಾವುದು ಬರಲಿಲ್ಲ ನದ್ರೆ ನೀವು ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಬ್ಯಾಂಕ್ ಗೆ ಹೊಫಿ ಅರ್ಜಿ ಸಲ್ಲಿಸಿ ನೀವು ಆಧಾರ್ ಸೀಡಿಂಗ್ ಮಾಡ್ಕೊಬಹುದು . 


ಇತರಹದ ಉಪಯೋಗ ವಾಗುವ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ , ಹಾಗು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ, ನಿಮ್ಮ ಅನಿಸಿಕೆಗಳು ಕಾಮೆಂಟ್ ಮೂಲಕ ತಿಳಿಸಿ. 

******** ಧನ್ಯವಾದಗಳು ********